Description
ಹೊ ವೆ ಶೇಷಾದ್ರಿಯವರ ಆಯ್ದ ಲೇಖನಗಳು
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ’ಪರಿವ್ರಾಜಕ’ ನಂತೆ ನಿರಂತರ ಪ್ರವಾಸ ಮಾಡುತ್ತ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಹೊ ವೆ ಶೇಷಾದ್ರಿಯವರು ಬರವಣಿಗೆಯನ್ನು ವ್ರತದಂತೆ ನಡೆಸಿದವರು. ಶೇಷಾದ್ರಿಯವರು ಮೂರು ದಶಕಗಳಿಗೂ ಹೆಚ್ಚುಕಾಲ ’ಉತ್ಥಾನ’ ಮಾಸಪತ್ರಿಕೆಗೆ ಬರೆದ ಅಂಕಣಬರಹಗಳ ಸಂಕಲನಗಳಿಂದ ಆಯ್ದ ಲೇಖನಗಳ ಸಂಗ್ರಹ, ಈ ಕೃತಿ – ’ಪ್ರಬಂಧ ಸಂಚಯ’.