Description
ಈ ಕೃತಿಯಲ್ಲಿ ಮಾನ್ಯ ಡಿ ವಿ ಜಿ ಯವರು ಜನ ಸಾಮಾನ್ಯರಿಗೆ ಹೇಗೆ ಜೀವನವನ್ನು ನಡೆಸಬೇಕು, ಬದುಕಿನಲ್ಲಿ ಯಾವುದು ಚೆನ್ನ, ಯಾವುದು ಒಳ್ಳೆಯದು ಎಂದು ತಿಳಿಸಿಕೊಟ್ಟಿದ್ದಾರೆ. ಮುಖ್ಯವಾಗಿ ಪ್ರತಿಯೊಂದು ಪದ್ಯವೂ, ಪ್ರತಿಯೊಂದು ಪದವೂ ವೇದಾಂತ ಸಾರವನ್ನು ಮತ್ತು ಅವರ ಅನುಭವವನ್ನು ತುಂಬಿ ತುಳುಕುತ್ತಿದೆ. ಹೀಗೆ “ಮಂಕುತಿಮ್ಮನ ಕಗ್ಗ” ದ ಸಮಗ್ರದರ್ಶನವನ್ನು ಪಡೆಯಲು ಈ ಗ್ರಂಥ ತುಂಬ ಉಪಯೋಗವಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.