Description
ಟಿಪ್ಪು ಒಬ್ಬ ದೇಶಪ್ರೇಮಿ, ವೀರ, ಹುತಾತ್ಮ, ಸರ್ವಧರ್ಮ ಪ್ರೇಮಿ ಎಂದು ಹಲವರು ಅವನನ್ನು ವಿಜ್ರಂಭಿಸಿದ್ದಾರೆ. ಆದರೆ ಅವನ ಮೂಲ ದಾಖಲೆಗಳನ್ನು ಪರಿಶೀಲಿಸಿದರೆ ಅವನೊಬ್ಬ ಕ್ರೂರಿ, ಮತಾಂಧ, ಸ್ವಾರ್ಥಿ, ಕರ್ನಾಟಕದ ಚರಿತ್ರೆಗೆ ಕಳಂಕ ತಂದಿರುವವನು ಎಂಬುದು ಸ್ಪಷ್ಟವಾಗುತ್ತದೆ. ಅನೇಕ ಪ್ರಮುಖ ದಾಖಲೆಗಳನ್ನು ಅವಲಂಬಿಸಿರುವ ಈ ಕೃತಿ ಟಿಪ್ಪುವಿನ ನಿಜ ಚರಿತ್ರೆಯನ್ನು ಬಿಚ್ಚಿಡುತ್ತದೆ. ಭಾರತದ ಇಂದಿನ ಮುಂದಿನ ಸ್ಥಿತಿಯು ಬಗ್ಗೆ ಗಂಭೀರ ಚಿಂತನೆಗೆ ತೊಡಗಿಸುತ್ತದೆ.ಇಲ್ಲಿಯ ಬಹುತೇಕ ಅಭಿಪ್ರಾಯಗಳು ಸಂಪೂರ್ಣ ವಸ್ತುನಿಷ್ಠಃ ಮತ್ತು ಅವುಗಳನ್ನು ನೇರವಾಗಿ ಕೊಂಕು, ವ್ಯಂಗ್ಯ, ಅನಾಗರಿಕ ಅಲ್ಲದ ಭಾಷೆ ಮತ್ತು ರೀತಿಗಳಲ್ಲಿ ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ.